ಶ್ರೀ ಗುರುನರಸಿಂಹ ಸಭಾಭಾವನ , ಪಾಂಡೇಶ್ವರ, ಮಂಗಳೂರು 575001

ನಮ್ಮ ಕಾರ್ಯಕ್ರಮಗಳು - ಕೇಂದ್ರ ಮಹಾಧಿವೇಶನ – ಕೋಟದವರ ಹಬ್ಬ” ಹಾಗೂ ವಾರ್ಷಿಕ ಮಹಾಸಭೆ ದಿನಾಂಕ: 27-09-2026, ಭಾನುವಾರ ಸ್ಥಳ : ಸಂಘನಿಕೇತನ, ಮಂಗಳೂರು

“ಕೂಟವಾಣಿ” - ಮಂಗಳೂರು ಅಂಗಸಂಸ್ಥೆಯ ದ್ವೈಮಾಸಿಕ 

 “ಕೂಟವಾಣಿ” ಮಾಸಪತ್ರಿಕೆಯನ್ನು ಆರಂಭಿಸಿದ್ದು ಅಕ್ಟೋಬರ್ 2006ರಲ್ಲಿ – ಕೂಟ ಮಹಾ ಜಗತ್ತು – ಮಂಗಳೂರು ಅಂಗಸಂಸ್ಥೆಯ ಕಾರ್ಯಕಾರಿ ಸಮಿತಿಯ ನಿರ್ಣಯದ ಅನುಸಾರ.

“ಕೂಟವಾಣಿ” ಮಾಸಪತ್ರಿಕೆಯಲ್ಲಿ ನಮ್ಮ ಅಂಗಸಂಸ್ಥೆಯ ಮತ್ತು ಕೇಂದ್ರ ಸಂಸ್ಥೆಯ ಚಟುವಟಿಕೆಗಳ ವರದಿಗಳನ್ನು ಪ್ರಕಟಿಸಲಾಗುತ್ತಿದೆ. ಜೊತೆಗೆ, ಸಾಂದರ್ಭಿಕ, ಧಾರ್ಮಿಕ ಮತ್ತು ಅಧ್ಯಾತ್ಮಿಕ ವಿಷಯಗಳಿಗೆ ಸಂಬಂಧಿಸಿದ ಲೇಖನಗಳೂ ಅದರ ಹೂರಣ. 

ಅಕ್ಟೋಬರ್ 2016ರಲ್ಲಿ ಹತ್ತು ವರುಷ ಪೂರೈಸಿದ ಸಂದರ್ಭದಲ್ಲಿ “ಕೂಟವಾಣಿಯ” ದಶಮಾನೋತ್ಸವ ವಿಶೇಷಾಂಕ ಲೋಕಾರ್ಪಣೆಯಾಗಿತ್ತು. ಅಕ್ಟೋಬರ್ 2023ರಿಂದ “ಕೂಟವಾಣಿ” ದ್ವೈಮಾಸಿಕವಾಗಿ ಪ್ರಕಟವಾಗುತ್ತಿದೆ. 

ಪ್ರಾರಂಭದ ವರುಷಗಳಲ್ಲಿ ಶ್ರೀ ಪಾ.ನ. ಮಯ್ಯರು ಪ್ರಧಾನ ಸಂಪಾದಕರಾಗಿದ್ದರು. ಕನ್ನಡ ಭಾಷೆ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಪ್ರಖ್ಯಾತರಾಗಿದ್ದ ಅವರ ನಿಧನಾ ನಂತರ ಶ್ರೀ ಪೊಳಲಿ ನಿತ್ಯಾನಂದ ಕಾರಂತರು “ಕೂಟವಾಣಿ”ಯನ್ನು ಪ್ರಧಾನ ಸಂಪಾದಕರಾಗಿ ಮುನ್ನಡೆಸಿದರು. ಇವರು ಯಕ್ಷಗಾನ ಕ್ಷೇತ್ರದಲ್ಲಿ ಪ್ರಸಂಗಕರ್ತರಾಗಿ, ತಾಳಮದ್ದಳೆ ಕಲಾವಿದರಾಗಿ ಹಾಗೂ ಅಧ್ಯಾತ್ಮ ಚಿಂತಕರಾಗಿ ಸುಪ್ರಸಿದ್ಧರು. ಏಪ್ರಿಲ್ 2023ರಿಂದ ಶ್ರೀ ಅಡ್ಡೂರು ಕೃಷ್ಣ ರಾವ್ “ಕೂಟವಾಣಿ”ಯ ಪ್ರಧಾನ ಸಂಪಾದಕರಾಗಿದ್ದಾರೆ. ನಿವೃತ್ತ ಬ್ಯಾಂಕ್ ಅಧಿಕಾರಿಯಾದ ಇವರು ಬರಹಗಾರರಾಗಿ ಹಾಗೂ ಹಲವು ಆಂದೋಲನಗಳ ರೂವಾರಿಯಾಗಿ ಹೆಸರುವಾಸಿ. 

“ಕೂಟವಾಣಿ”ಯ ಕೆಲವು ಸಂಚಿಕೆಗಳು ಇಲ್ಲಿವೆ. 

-ಅಡ್ಡೂರು ಕೃಷ್ಣ ರಾವ್ 

 ಪ್ರಧಾನ ಸಂಪಾದಕ 

ಕೂಟವಾಣಿ Feb – March 2025

ಕೂಟವಾಣಿ May 2025

ಕೂಟವಾಣಿ Latest

knKannada