ಕೂಟ ಮಹಾಜಗತ್ತು ಸಾಲಿಗ್ರಾಮ (ರಿ ), ಮಂಗಳೂರು ಅಂಗಸಂಸ್ಥೆಯು 1955 ರಲ್ಲಿ ಪ್ರಾರಂಭವಾಯಿತು. ಕೋಟ ವಾಸುದೇವ ಕಾರಂತರು ಇದರ ಸ್ಥಾಪಕ ಅಧ್ಯಕ್ಷರಾಗಿದ್ದರು. ನಮ್ಮ ಅಂಗಸಂಸ್ಥೆಯನ್ನು ಪ್ರಾರಂಭಿಸಿದ್ದರ ಮುಖ್ಯ ಉದ್ದೇಶ/ಅಭಿಲಾಷೆಯು ನಮ್ಮ ಕೇಂದ್ರ ಸಂಸ್ಥೆಯ ಉದ್ದೇಶಗಳಾದ ಜಗತ್ತಿನ ಮಹಾಜನರ ಧಾರ್ಮಿಕ, ಸಾಮಾಜಿಕ, ಹಾಗೂ ನೈತಿಕ ಉನ್ನತಿಗಾಗಿ ಪ್ರಯತ್ನಿಸುವುದು ಮತ್ತು ಅವರಲ್ಲಿ ಧಾರ್ಮಿಕ ಶ್ರದ್ಧೆಯನ್ನು ಹೆಚ್ಚಿಸುವುದು, ಶ್ರೀ ಗುರು ನರಸಿಂಹ ದೇವಸ್ಥಾನದ ಅಭಿವೃದ್ಧಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಕೈಗೊಳ್ಳುವುದು, ಆ ಕಾರ್ಯಗಳ ಸಾಧನೆಗೆ ಬೇಕಾದ ಆರ್ಥಿಕ ಸಹಾಯವನ್ನು ಭಕ್ತ ಮಹಾ ಜನರಿಂದ ಸಂಗ್ರಹಿಸುವುದು, ಕೂಟ ಬಂಧುಗಳ ಸಾಮಾಜಿಕ ಹಾಗೂ ಸಾಂಸ್ಕೃತಿಕ ಅಭಿವೃದ್ಧಿಗಾಗಿ ವಿದ್ಯಾರ್ಥಿ ನಿಲಯ ಹಾಗೂ ಕಲ್ಯಾಣ ಮಂಟಪ ಮುಂತಾದ ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸುವುದು ಇತ್ಯಾದಿ.
ಅಂಗಸಂಸ್ಥೆಯ ಕಾರ್ಯಾಲಯವು ಪ್ರಾರಂಭವಾದ ದಿನದಿಂದ ಕೆಲವು ವರ್ಷಗಳ ಕಾಲ ಮಂಗಳಾದೇವಿ ದೇವಸ್ಥಾನದ ವಠಾರದಲ್ಲಿ ಮತ್ತು ಚಕ್ರಪಾಣಿ ಗೋಪಾಲಕೃಷ್ಣ ದೇವಸ್ಥಾನದ ವಠಾರದಲ್ಲಿ ನಡೆಯುತ್ತಿತ್ತು. 2004ರಲ್ಲಿ ಪಾಂಡೇಶ್ವರದಲ್ಲಿ ನಮ್ಮದೇ ಆದ ಸುಸಜ್ಜಿತ “ಶ್ರೀ ಗುರುನರಸಿಂಹ ಸಭಾಭವನ” ನಿರ್ಮಾಣವಾದ ಬಳಿಕ ನಮ್ಮ ಕಾರ್ಯಾಲಯವು ಸ್ವಂತ ಕಟ್ಟಡದಲ್ಲಿ ನಡೆಯುತ್ತಿದೆ. ಶ್ರೀ ಪಿ. ಎಸ್. ಮಧ್ಯಸ್ಥರ ಮುಂದಾಳತ್ವದಲ್ಲಿ, ಇತರ ಪದಾದಿಕಾರಿಗಳ ಹಾಗೂ ಕೂಟ ಬಂಧುಗಳ ಪರಿಶ್ರಮದಿಂದ 2004 ರಲ್ಲಿ ನಮ್ಮದೇ ಆದ ನೂತನ 3 ಅಂತಸ್ತಿನ “ಶ್ರೀ ಗುರು ನರಸಿಂಹ ಸಭಾಭವನ” ನಿರ್ಮಾಣಗೊಂಡಿತು. ಈ ಕಟ್ಟಡಕ್ಕೆ ಬೇಕಾದ 7 ಸೆಂಟ್ಸ್ ಜಾಗವನ್ನು ಶ್ರೀಮತಿ ವಿಜಯಲಕ್ಷ್ಮಿಯವರು ಉಚಿತವಾಗಿ ನೀಡಿರುತ್ತಾರೆ. ಅವರ ಈ ವಿಶಾಲ ಹೃದಯಕ್ಕೆ ಎಲ್ಲ ಕೂಟ ಬಂಧುಗಳು ಚಿರ ಋಣಿ. ಇದಲ್ಲದೆ 2010 ರಲ್ಲಿ ಪುನಃ 6 ಸೆಂಟ್ಸ್ ಜಾಗವನ್ನು ಬಹಳ ಕಡಿಮೆ ಬೆಲೆಯಲ್ಲಿ ನೀಡಿರುತ್ತಾರೆ. ಈ ಸ್ಥಳದಲ್ಲಿ ನಾವು ಭೋಜನ ವ್ಯವಸ್ಥೆಗೆ ವಿಸ್ತೃತ ಕಟ್ಟಡವನ್ನು ನಿರ್ಮಿಸಿ 2022ರಲ್ಲಿ ಉದ್ಘಾಟನೆ ಮಾಡಿರುತ್ತೇವೆ.

ಹೆಚ್ಚು ಕ್ರಿಯಾಶೀಲವಾಗುವ ಗತಿಯಲ್ಲಿ ಶ್ರೀ ಗುರುನರಸಿಂಹ ವಿಧ್ಯಾವರ್ಧಕ ನಿಧಿ ಎಂಬ ಟ್ರಸ್ಟ್, 1996 ರಲ್ಲಿ ಸ್ಥಾಪನೆಗೊಂಡಿತು. ಅದು ನಮ್ಮ ಸದಸ್ಯ ಕುಟುಂಬದ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಪ್ರೋತ್ಸಾಹ, ಧಾರ್ಮಿಕ ಪ್ರಜ್ಞೆ ಜಾಗೃತಿಗೊಳಿಸುವುದು ಹಾಗೂ ಜ್ಞಾನವಿಕಾಸ ಕಾರ್ಯಕ್ರಮಗಳನ್ನು ಜರಗಿಸುವ ಉದ್ದೇಶಗಳೊಂದಿಗೆ ಪ್ರಾರಂಭವಾಯಿತು.
“ ಕೂಟವಾಣಿ” ಪತ್ರಿಕೆ : 2006 ಅಕ್ಟೋಬರ್ ತಿಂಗಳಿನಿಂದ ನಮ್ಮದೇ ಆದ “ಕೂಟ ವಾಣಿ” ಮಾಸ ಪತ್ರಿಕೆಯನ್ನು ಆರಂಭಿಸಲಾಯಿತು. ನಮ್ಮ ಅಂಗ ಸಂಸ್ಥೆಯ ಚಟುವಟಿಕೆಗಳು, ಕೇಂದ್ರ ಸಂಸ್ಥೆಯ ಚಟುವಟಿಕೆಗಳು ಹಾಗೂ ಶ್ರೀ ಗುರು ನರಸಿಂಹ ದೇವಸ್ಥಾನ, ಸಾಲಿಗ್ರಾಮದಲ್ಲಿ ನಡೆಯುವ ಕಾರ್ಯಕ್ರಮಗಳ ಬಗ್ಗೆ ಈ ಮಾಸ ಪತ್ರಿಕೆಯಲ್ಲಿ ಪ್ರಕಟಿಸಲಾಗುತ್ತಿದೆ. ಜೊತೆಗೆ ಸಾಂದರ್ಭಿಕ, ಧಾರ್ಮಿಕ ಹಾಗೂ ಅಧ್ಯಾತ್ಮಿಕ ಚಿಂತನೆಗಳನ್ನು ಈ ಪತ್ರಿಕೆಯಲ್ಲಿ ಬೆಳಕು ಕಾಣುತ್ತಿವೆ. 2023ರ ಅಕ್ಟೋಬರ್ ತಿಂಗಳಿನಿಂದ ಈ ಪತ್ರಿಕೆಯನ್ನು ದ್ವೈಮಾಸಿಕ ಪತ್ರಿಕೆಯಾಗಿ ಪ್ರಕಟಿಸಲಾಗುತ್ತಿದೆ. ಈ ಪತ್ರಿಕೆಯನ್ನು ಪ್ರಧಾನ ಸಂಪಾದಕರಾಗಿ ಶ್ರೀ ಪಾ. ನಾ. ಮಯ್ಯ ಮತ್ತು ಅವರ ಬಳಿಕ ಶ್ರೀ ಪೊಳಲಿ ನಿತ್ಯಾನಂದ ಕಾರಂತ ಅವರು ಬಹಳ ಉತ್ತಮ ರೀತಿಯಲ್ಲಿ ನಡೆಸಿದ್ದರು. ಎಪ್ರಿಲ್ 2023ರಿಂದ ಶ್ರೀ ಅಡ್ಡೂರು ಕೃಷ್ಣ ರಾವ್ ಅವರು ಪ್ರಧಾನ ಸಂಪಾದಕರಾಗಿ ಉತ್ತಮ ರೀತಿಯಲ್ಲಿ ಈ ಪತ್ರಿಕೆಯನ್ನು ನಡೆಸುತ್ತಿದ್ದಾರೆ.

ಕೂಟ ವಾಸುದೇವ ಕಾರಂತ : ಇವರು ನಮ್ಮ ಸ್ತಾಪಕ ಅಧ್ಯಕ್ಷರಾಗಿ ಹಲವು ವರ್ಷಗಳ ಕಾಲ ನಮ್ಮ ಅಂಗ ಸಂಸ್ಥೆಯನ್ನು ಮುನ್ನಡೆಸಿದ್ದರು. ಇವರು ತಮ್ಮ ಬರವಣಿಗೆಯ ಮೂಲಕ ಸನಾತನ ಧರ್ಮ ಮತ್ತು ಸಂಸ್ಕೃತಿಯ ಕುರಿತು ಜನತೆಯಲ್ಲಿ ಜಾಗ್ರತಿ ಮೂಡಿಸಿದವರು.
ಶ್ರೀ ಕೇಶವ ಕಾರಂತ
ಶ್ರೀ ಕಣ್ಣೂರ್ ರಾಮಚಂದ್ರ ರಾವ್

ಶ್ರೀ ಪಿ. ಎಸ್. ಮಧ್ಯಸ್ಥ : ಇವರು 2004 ತನಕ ಸುಮಾರು 15 ವರ್ಷಗಳ ಕಾಲ ನಮ್ಮ ಅಂಗಸಂಸ್ಥೆಯ ಅಧ್ಯಕ್ಷರಾಗಿ ಹಲವು ಪ್ರಮುಖ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ನಮ್ಮ ಶ್ರೀ ಗುರು ನರಸಿಂಹ ಸಭಾಭವನದ ನಿರ್ಮಾಣಕ್ಕಾಗಿ ಅವರು ವಹಿಸಿದ ಮುತುವರ್ಜಿ ಹಾಗೂ ಅವರು ನೀಡಿದ ದೊಡ್ಡ ಮೊತ್ತದ ದೇಣಿಗೆ ಯನ್ನು ಪ್ರತಿಯೊಬ್ಬ ಕೂಟ ಬಂಧುವೂ ಕೃತಜ್ಞ ತೆಯಿಂದ ನೆನಪಿಸಿಕೊಳ್ಳುತ್ತಾರೆ.

ಶ್ರೀ ಭಾಸ್ಕರ ನಾವಡ : 2004 ರಿಂದ 2009 ವರೆಗೆ ನಮ್ಮ ಅಂಗಸಂಸ್ಥೆ ಯ ಅಧ್ಯಕ್ಷರಾಗಿದ್ದರು

ಶ್ರೀ ಶೇಷಗಿರಿ ರಾವ್ : ಇವರು 2009 ರಿಂದ 2020 ರ ವರೆಗೆ ನಮ್ಮ ಅಂಗಸಂಸ್ಥೆಯ ಅಧ್ಯಕ್ಷರಾಗಿದ್ದರು. ನಮ್ಮ ಅಂಗಸಂಸ್ಥೆಯ ಪದಾಧಿಕಾರಿಯಾಗಿ, ಅಧ್ಯಕ್ಷರಾಗಿ ಅವರು ಸಲ್ಲಿಸಿದ ಸೇವೆ ಬಹುಕಾಲ ನೆನಪಿನಲ್ಲಿ ಉಳಿಯುವಂತದ್ದು. ಅವರೊಬ್ಬ ಆಧ್ಯಾತ್ಮಿಕ ಚಿಂತಕರಾಗಿದ್ದರು.

ಶ್ರೀ ಏರ್ಯ ಚಂದ್ರಶೇಖರ ಮಯ್ಯ : 2020 ರಿಂದ 2024 ರ ವರೆಗೆ ನಮ್ಮ ಅಂಗಸಂಸ್ಥೆಯ ಅಧ್ಯಕ್ಷರಾಗಿದ್ದರು.

ಶ್ರೀ ಶ್ರೀಧರ ಹೊಳ್ಳ : 2024 ರಿಂದ ನಮ್ಮ ಅಂಗಸಂಸ್ಥೆಯ ಅಧ್ಯಕ್ಷರಾಗಿರುತ್ತಾರೆ.
ಮಹಿಳಾ ವೇದಿಕೆ : ನಮ್ಮ ಅಂಗಸಂಸ್ಥೆಯ ಅಂಗವಾಗಿ ನಮ್ಮ ಸಮಾಜದ ಮಹಿಳೆಯರ ಸಂಘಟನೆ, ಕೌಶಲ್ಯ ವೃದ್ಧಿ, ಜ್ಞಾನಾರ್ಜನೆ, ಅನುಭವಗಳ ವಿನಿಮಯ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವ ಧ್ಯೇಯೋದ್ದೇಶಗಳಿಂದ ಮಹಿಳಾ ವೇದಿಕೆ 1997 ರಲ್ಲಿ ರಚಿತಗೊಂಡಿದೆ.

ಇವರು ನಮ್ಮ ಸ್ತಾಪಕ ಅಧ್ಯಕ್ಷರಾಗಿ ಹಲವು ವರ್ಷಗಳ ಕಾಲ ನಮ್ಮ ಅಂಗ ಸಂಸ್ಥೆಯನ್ನು ಮುನ್ನಡೆಸಿದ್ದರು. ಇವರು ತಮ್ಮ ಬರವಣಿಗೆಯ ಮೂಲಕ ಸನಾತನ ಧರ್ಮ ಮತ್ತು ಸಂಸ್ಕೃತಿಯ ಕುರಿತು ಜನತೆಯಲ್ಲಿ ಜಾಗ್ರತಿ ಮೂಡಿಸಿದವರು.

ಇವರು 2004 ತನಕ ಸುಮಾರು 15 ವರ್ಷಗಳ ಕಾಲ ನಮ್ಮ ಅಂಗಸಂಸ್ಥೆಯ ಅಧ್ಯಕ್ಷರಾಗಿ ಹಲವು ಪ್ರಮುಖ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ನಮ್ಮ ಶ್ರೀ ಗುರು ನರಸಿಂಹ ಸಭಾಭವನದ ನಿರ್ಮಾಣಕ್ಕಾಗಿ ಅವರು ವಹಿಸಿದ ಮುತುವರ್ಜಿ ಹಾಗೂ ಅವರು ನೀಡಿದ ದೊಡ್ಡ ಮೊತ್ತದ ದೇಣಿಗೆ ಯನ್ನು ಪ್ರತಿಯೊಬ್ಬ ಕೂಟ ಬಂಧುವೂ ಕೃತಜ್ಞ ತೆಯಿಂದ ನೆನಪಿಸಿಕೊಳ್ಳುತ್ತಾರೆ.

2004 ರಿಂದ 2009 ವರೆಗೆ ನಮ್ಮ ಅಂಗಸಂಸ್ಥೆ ಯ ಅಧ್ಯಕ್ಷರಾಗಿದ್ದರು

ಇವರು 2009 ರಿಂದ 2020 ರ ವರೆಗೆ ನಮ್ಮ ಅಂಗಸಂಸ್ಥೆಯ ಅಧ್ಯಕ್ಷರಾಗಿದ್ದರು. ನಮ್ಮ ಅಂಗಸಂಸ್ಥೆಯ ಪದಾಧಿಕಾರಿಯಾಗಿ, ಅಧ್ಯಕ್ಷರಾಗಿ ಅವರು ಸಲ್ಲಿಸಿದ ಸೇವೆ ಬಹುಕಾಲ ನೆನಪಿನಲ್ಲಿ ಉಳಿಯುವಂತದ್ದು. ಅವರೊಬ್ಬ ಆಧ್ಯಾತ್ಮಿಕ ಚಿಂತಕರಾಗಿದ್ದರು.

2020 ರಿಂದ 2024 ರ ವರೆಗೆ ನಮ್ಮ ಅಂಗಸಂಸ್ಥೆಯ ಅಧ್ಯಕ್ಷರಾಗಿದ್ದರು.

2024 ರಿಂದ ನಮ್ಮ ಅಂಗಸಂಸ್ಥೆಯ ಅಧ್ಯಕ್ಷರಾಗಿರುತ್ತಾರೆ.
ಮಹಿಳಾ ವೇದಿಕೆ : ನಮ್ಮ ಅಂಗಸಂಸ್ಥೆಯ ಅಂಗವಾಗಿ ನಮ್ಮ ಸಮಾಜದ ಮಹಿಳೆಯರ ಸಂಘಟನೆ, ಕೌಶಲ್ಯ ವೃದ್ಧಿ, ಜ್ಞಾನಾರ್ಜನೆ, ಅನುಭವಗಳ ವಿನಿಮಯ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವ ಧ್ಯೇಯೋದ್ದೇಶಗಳಿಂದ ಮಹಿಳಾ ವೇದಿಕೆ 1997 ರಲ್ಲಿ ರಚಿತಗೊಂಡಿದೆ.
Never miss any important news. Subscribe to our newsletter.
© 2026@ ಕೂಟ ಮಹಾ ಜಗತ್ತು ಸಾಲಿಗ್ರಾಮ (ರಿ) ಮಂಗಳೂರು ಅಂಗ ಸಂಸ್ಥೆ